Wednesday, March 11, 2015

ಭಾರತದ ಆಟಗಾರರಿಗೆ ಅಭ್ಯಾಸದಲ್ಲಿ ಶಾಲಾ ಮಕ್ಕಳೇ ಬೌಲ

ಅಡಿಲೇಡ್: ಟೀಮ್ ಇಂಡಿಯಾದ ಬ್ಯಾಟ್ಸ್ಮನ್ಗಳಿಗೆ  ಬೌಲಿಂಗ್ ಮಾಡಬೇಕು ಎಂದು ಅದೆಷ್ಟು ಯುವ ಕ್ರಿಕೆಟಿಗರ ಆಶಯವಾಗಿತ್ತೊ. ಆದರೆ 15 ಮಂದಿ ಶಾಲಾ ಮಕ್ಕಳು ಈ ಸದವಾಕಾಶವನ್ನು ತಮ್ಮದಾಗಿಸಿಕೊಂಡಿದ್ದಾರೆ. ಹೌದು ವಿಶ್ವಕಪ್ಗೆ ತೆರಳಿರುವ ಭಾರತ ತಂಡದ ಆಟಗಾರರಿಗೆ ಅಭ್ಯಾಸ ವೇಳೆ 15 ಮಂದಿ ಶಾಲಾ ಮಕ್ಕಳು ಬೌಲಿಂಗ್ ಮಾಡುವ ಅವಕಾಶ ಪಡೆದಿದ್ದಾರೆ.

ದೇಶದ ವಿವಿಧ ಶಾಲೆಯ 16 ರಿಂದ 17 ವರ್ಷ ವಯಸ್ಸಿನ ಮಕ್ಕಳನ್ನು ಇಲ್ಲಿ ಆಯ್ಕೆಮಾಡಿಕೊಳ್ಳಲಾಗಿದೆ. ದಕ್ಷಿಣ ಆಸ್ಟ್ರೇಲಿಯಾ ಪ್ರವಾಸಿ ಸಮಿತಿ ಮಕ್ಕಳಿಗೆ ಈ ಅವಕಾಶ ನೀಡಿದ್ದು, 16 ದಿನಗಳ ಕಾಲ ಪ್ರವಾಸ ಇದಾಗಿದ್ದು ಮಕ್ಕಳೆಲ್ಲ ಅಡಿಲೇಡ್ಗೆ ಬಂದಿಳಿದಿದ್ದಾರೆ. ಈ ಮಕ್ಕಳೆಲ್ಲಾ ಕಳೆದ ಭಾನುವಾರ ನಡೆದ ಭಾರತ ಪಾಕಿಸ್ತಾನ ಪಂದ್ಯಗಳನ್ನು ವೀಕ್ಷಿಸಿದ್ದರು. ನಂತರ ಆಸ್ಟ್ರೇಲಿಯಾದ ವೇಗದ ಬೌಲರ್ ಬ್ರೆಟ್ ಲೀ ಅವರೊಂದಿಗೆ ಸಮಾಲೋಚಿಸಿದ್ದಾರೆ. ಲೀ ನೀಡಿದ ಸಲಹೆಗಳನ್ನು ಎನ್ಕ್ಯಾಷ್ ಮಾಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ತಾವು ವೀಕ್ಷಿಸಿದ ಪಂದ್ಯದ ರೋಚಕ ಕ್ಷಣಗಳನ್ನು ಹಂಚಿಕೊಂಡರು. ಭಾರತ ತಂಡ ಸಂಪ್ರಾದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸಿದ ಆ ಕ್ಷಣ ನನ್ನ ಜೀವನದ ಅತ್ಯುನ್ನತ ರೋಚಕ ಕ್ಷಣ ಎಂದು ವಿದ್ಯಾಥರ್ಿಯೊಬ್ಬ ಬಣ್ಣಿಸಿದ್ದಾರೆ.

ಮಕ್ಕಳಿಗೆ ಇಂತಹ ಪ್ರವಾಸಗಳಿಂದ ಕ್ರಿಕೆಟ್ ಆಟದ  ಬಗ್ಗೆ ಆಸಕ್ತಿ ಹೆಚ್ಚಾಗುತ್ತೆ. ಅಲ್ಲದೇ 2 ವಾರಗಳ ಕಾಲ ಕ್ರಿಕೆಟಿತರ ಜೊತೆ ಒಡನಾಟ, ಅವರೊಂದಿಗೆ ಕಳೆಯುವ ಕ್ಷಣಗಳು ನಿಜಕ್ಕೂ ಅದ್ಭುತವಾಗಿರುತ್ತವೆ.  ಅಲ್ಲದೇ ಭಾರತದ ಕ್ರಿಕೆಟಿಗರ ಅಭ್ಯಾಸ ವೇಳೆಯಲ್ಲಿ ಬೌಲಿಂಗ್ ಮಾಡುವ ಅವಕಾಶ ಪಡೆದು ಪುನೀತರಾಗಿರುತ್ತಾರೆ. ಕನಸಿನ ಟೀಮ್ನಲ್ಲಿ ಆಟವಾಡಿದ ಪ್ರತಿಯೊಬ್ಬ ಮಕ್ಕಳ ಜೀವನದಲ್ಲಿ ಈ ಪ್ರವಾಸ ಅವೀಸ್ಮರಣಿಯ ಕ್ಷಣಗಳಾಗಿರುತ್ತವೆ. ಹಾಗೆ ಆಸಿಸ್ನ ಸ್ಪೀಡ್ ಸ್ಟಾರ್ ಬ್ರೆಟ್ ಲೀ ಭೇಟಿಯೂ ಅನನ್ಯ ಕ್ಷಣಗಳಾಗಿವೆ ಎಂದು ದಕ್ಷಿಣ ಆಸ್ಟ್ರೇಲಿಯಾ ಸಮಿತಿಯ ಸದಸ್ಯ ಜೇ ವೆಥ್ರಿಲ್ ಹೇಳಿದರು.

ಕ್ರಿಕೆಟ್ ಆಟವನ್ನು ತುಂಬಾ ಇಷ್ಟಪಡುತ್ತೆನೆ. ಆ ಆಟ ನಮ್ಮ ಕುಟುಂಬದವರಿಗೆಲ್ಲಾ ಅಚ್ಚುಮೆಚ್ಚು, ಅತ್ಯುತ್ಸಾಹದಿಂದ 15 ಮಕ್ಕಳ ಕನಸಿನ ತಂಡದ ಕೋಚ್ ಆಗಲು ಒಪ್ಪಿಕೊಂಡಿದ್ದೆ. ಒಂದಲ್ಲ ಒಂದು ದಿನ ಈ ಮಕ್ಕಳು ರಾಷ್ಟ್ರ ಕಂಡ ಅದ್ಭುತ ಕ್ರಿಕೆಟಿಗರಾಗುತ್ತಾರೆ ಎಂದು ಕನಸಿನ ತಂಡದ ಕೋಚ್ ಬೋಗರ್ಾಸ್ ಹೇಳಿದರು.

ಇನ್ನು ಈ ಮಕ್ಕಳ ಕನಸಿನ ತಂಡಕ್ಕೆ 2500 ಕ್ಕೂ ಹೆಚ್ಚು ಅಜರ್ಿಗಳು ಬಂದಿದ್ದವು. ಅದರಲ್ಲಿ ದೆಹಲಿ ಹಾಗೂ ಮುಂಬೈ ಪ್ರದೇಶಗಳಿಂದ 450 ಅಜರ್ಿಗಳು ಬಂದಿದ್ದವು. 3 ತಿಂಗಳುಗಳ ಕಾಲ ನಡೆದ ಈ ಪ್ರತಿಭಾ ಶೋಧದಲ್ಲಿ ಅಂತಿಮವಾಗಿ 15 ಮಕ್ಕಳನ್ನು ಆಯ್ಕೆಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ರಾಜಸ್ತಾನ ರಾಯಲ್ಸ್ ಫ್ರಾಂಚೈಸಿ ಕೂಡ ಸಾಥ್ ನೀಡಿತ್ತು.

No comments:

Post a Comment