Wednesday, March 11, 2015

ಭಾರತದ ಆಟಗಾರರಿಗೆ ಅಭ್ಯಾಸದಲ್ಲಿ ಶಾಲಾ ಮಕ್ಕಳೇ ಬೌಲ

ಅಡಿಲೇಡ್: ಟೀಮ್ ಇಂಡಿಯಾದ ಬ್ಯಾಟ್ಸ್ಮನ್ಗಳಿಗೆ  ಬೌಲಿಂಗ್ ಮಾಡಬೇಕು ಎಂದು ಅದೆಷ್ಟು ಯುವ ಕ್ರಿಕೆಟಿಗರ ಆಶಯವಾಗಿತ್ತೊ. ಆದರೆ 15 ಮಂದಿ ಶಾಲಾ ಮಕ್ಕಳು ಈ ಸದವಾಕಾಶವನ್ನು ತಮ್ಮದಾಗಿಸಿಕೊಂಡಿದ್ದಾರೆ. ಹೌದು ವಿಶ್ವಕಪ್ಗೆ ತೆರಳಿರುವ ಭಾರತ ತಂಡದ ಆಟಗಾರರಿಗೆ ಅಭ್ಯಾಸ ವೇಳೆ 15 ಮಂದಿ ಶಾಲಾ ಮಕ್ಕಳು ಬೌಲಿಂಗ್ ಮಾಡುವ ಅವಕಾಶ ಪಡೆದಿದ್ದಾರೆ.

ದೇಶದ ವಿವಿಧ ಶಾಲೆಯ 16 ರಿಂದ 17 ವರ್ಷ ವಯಸ್ಸಿನ ಮಕ್ಕಳನ್ನು ಇಲ್ಲಿ ಆಯ್ಕೆಮಾಡಿಕೊಳ್ಳಲಾಗಿದೆ. ದಕ್ಷಿಣ ಆಸ್ಟ್ರೇಲಿಯಾ ಪ್ರವಾಸಿ ಸಮಿತಿ ಮಕ್ಕಳಿಗೆ ಈ ಅವಕಾಶ ನೀಡಿದ್ದು, 16 ದಿನಗಳ ಕಾಲ ಪ್ರವಾಸ ಇದಾಗಿದ್ದು ಮಕ್ಕಳೆಲ್ಲ ಅಡಿಲೇಡ್ಗೆ ಬಂದಿಳಿದಿದ್ದಾರೆ. ಈ ಮಕ್ಕಳೆಲ್ಲಾ ಕಳೆದ ಭಾನುವಾರ ನಡೆದ ಭಾರತ ಪಾಕಿಸ್ತಾನ ಪಂದ್ಯಗಳನ್ನು ವೀಕ್ಷಿಸಿದ್ದರು. ನಂತರ ಆಸ್ಟ್ರೇಲಿಯಾದ ವೇಗದ ಬೌಲರ್ ಬ್ರೆಟ್ ಲೀ ಅವರೊಂದಿಗೆ ಸಮಾಲೋಚಿಸಿದ್ದಾರೆ. ಲೀ ನೀಡಿದ ಸಲಹೆಗಳನ್ನು ಎನ್ಕ್ಯಾಷ್ ಮಾಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ತಾವು ವೀಕ್ಷಿಸಿದ ಪಂದ್ಯದ ರೋಚಕ ಕ್ಷಣಗಳನ್ನು ಹಂಚಿಕೊಂಡರು. ಭಾರತ ತಂಡ ಸಂಪ್ರಾದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸಿದ ಆ ಕ್ಷಣ ನನ್ನ ಜೀವನದ ಅತ್ಯುನ್ನತ ರೋಚಕ ಕ್ಷಣ ಎಂದು ವಿದ್ಯಾಥರ್ಿಯೊಬ್ಬ ಬಣ್ಣಿಸಿದ್ದಾರೆ.

ಮಕ್ಕಳಿಗೆ ಇಂತಹ ಪ್ರವಾಸಗಳಿಂದ ಕ್ರಿಕೆಟ್ ಆಟದ  ಬಗ್ಗೆ ಆಸಕ್ತಿ ಹೆಚ್ಚಾಗುತ್ತೆ. ಅಲ್ಲದೇ 2 ವಾರಗಳ ಕಾಲ ಕ್ರಿಕೆಟಿತರ ಜೊತೆ ಒಡನಾಟ, ಅವರೊಂದಿಗೆ ಕಳೆಯುವ ಕ್ಷಣಗಳು ನಿಜಕ್ಕೂ ಅದ್ಭುತವಾಗಿರುತ್ತವೆ.  ಅಲ್ಲದೇ ಭಾರತದ ಕ್ರಿಕೆಟಿಗರ ಅಭ್ಯಾಸ ವೇಳೆಯಲ್ಲಿ ಬೌಲಿಂಗ್ ಮಾಡುವ ಅವಕಾಶ ಪಡೆದು ಪುನೀತರಾಗಿರುತ್ತಾರೆ. ಕನಸಿನ ಟೀಮ್ನಲ್ಲಿ ಆಟವಾಡಿದ ಪ್ರತಿಯೊಬ್ಬ ಮಕ್ಕಳ ಜೀವನದಲ್ಲಿ ಈ ಪ್ರವಾಸ ಅವೀಸ್ಮರಣಿಯ ಕ್ಷಣಗಳಾಗಿರುತ್ತವೆ. ಹಾಗೆ ಆಸಿಸ್ನ ಸ್ಪೀಡ್ ಸ್ಟಾರ್ ಬ್ರೆಟ್ ಲೀ ಭೇಟಿಯೂ ಅನನ್ಯ ಕ್ಷಣಗಳಾಗಿವೆ ಎಂದು ದಕ್ಷಿಣ ಆಸ್ಟ್ರೇಲಿಯಾ ಸಮಿತಿಯ ಸದಸ್ಯ ಜೇ ವೆಥ್ರಿಲ್ ಹೇಳಿದರು.

ಕ್ರಿಕೆಟ್ ಆಟವನ್ನು ತುಂಬಾ ಇಷ್ಟಪಡುತ್ತೆನೆ. ಆ ಆಟ ನಮ್ಮ ಕುಟುಂಬದವರಿಗೆಲ್ಲಾ ಅಚ್ಚುಮೆಚ್ಚು, ಅತ್ಯುತ್ಸಾಹದಿಂದ 15 ಮಕ್ಕಳ ಕನಸಿನ ತಂಡದ ಕೋಚ್ ಆಗಲು ಒಪ್ಪಿಕೊಂಡಿದ್ದೆ. ಒಂದಲ್ಲ ಒಂದು ದಿನ ಈ ಮಕ್ಕಳು ರಾಷ್ಟ್ರ ಕಂಡ ಅದ್ಭುತ ಕ್ರಿಕೆಟಿಗರಾಗುತ್ತಾರೆ ಎಂದು ಕನಸಿನ ತಂಡದ ಕೋಚ್ ಬೋಗರ್ಾಸ್ ಹೇಳಿದರು.

ಇನ್ನು ಈ ಮಕ್ಕಳ ಕನಸಿನ ತಂಡಕ್ಕೆ 2500 ಕ್ಕೂ ಹೆಚ್ಚು ಅಜರ್ಿಗಳು ಬಂದಿದ್ದವು. ಅದರಲ್ಲಿ ದೆಹಲಿ ಹಾಗೂ ಮುಂಬೈ ಪ್ರದೇಶಗಳಿಂದ 450 ಅಜರ್ಿಗಳು ಬಂದಿದ್ದವು. 3 ತಿಂಗಳುಗಳ ಕಾಲ ನಡೆದ ಈ ಪ್ರತಿಭಾ ಶೋಧದಲ್ಲಿ ಅಂತಿಮವಾಗಿ 15 ಮಕ್ಕಳನ್ನು ಆಯ್ಕೆಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ರಾಜಸ್ತಾನ ರಾಯಲ್ಸ್ ಫ್ರಾಂಚೈಸಿ ಕೂಡ ಸಾಥ್ ನೀಡಿತ್ತು.
ವಿಶ್ವಕಪ್ನಲ್ಲಿದ್ದಾರೆ ಬ್ಯಾಡ್ ಬಾಯ್ಸ್

ಕ್ರಿಕೆಟ್ ಜೆಂಟಲ್ಮೆನ್ ಗೇಮ್.. ನಿಜಕ್ಕೂ ಕ್ರಿಕೆಟ್  ಸಭ್ಯರ ಆಟವೇ. ಆದರೆ ಈ ಆಟದಲ್ಲಿ ಆಡುವ ಆಟಗಾರರು ನಿಜಕ್ಕೂ ಸಭ್ಯರೇ ಎನ್ನುವ ಪ್ರಶ್ನೆ ಕಾಡುತ್ತಿದೆ. ಏಕೆಂದರೆ ಬಹುತೇಕ ಯಾವುದೇ ತಂಡದಲ್ಲಿರುವ ಆಟಗಾರರಿಗೆ ಕೊಂಚ ಮಟ್ಟಿಗಾದರೂ ಸಭ್ಯತೆ ಇರಬೇಕು. ಇಲ್ಲದೇ ಇದ್ದರೂ ರೂಢಿಸಿಕೊಳ್ಳಬೇಕು. ಆದರೆ ಕ್ರಿಕೆಟ್ ಪ್ರೀತಿಸುವ, ಆರಾಧಿಸುವ ದೇಶಗಳ ಆಟಗಾರರಿಗೆ ಅಂದರೆ ವಿಶ್ವ ಕ್ರಿಕೆಟ್ನ ಪ್ರಮುಖ ದೇಶಗಳ ಆಟಗಾರರಲ್ಲಿ ಇಂತಹ ಲಕ್ಷಣಗಳು ಕಾಣುತ್ತಿಲ್ಲ ಎನ್ನುವುದೇ ಬೇಸರದ ಸಂಗತಿ. ಇವರ ಉಪಟಳದಿಂದ ಬೇಸತ್ತಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ವಿವಿಧ ದೇಶಗಳ 8 ಮಂದಿ ಆಟಗಾರರನ್ನು 'ಬ್ಯಾಡ್ ಬಾಯ್ಸ್' ಲಿಸ್ಟ್ಗೆ ಸೇರಿಸಿದೆ.

ಹೌದು ಕ್ರಿಕೆಟ್ ಎನ್ನುವುದನ್ನು ಒಂದು ಆಟ ಎಂದು ನೋಡುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ವಿರಳವಾಗಿದೆ. ಆಟದಲ್ಲಿ ಸೋಲು-ಗೆಲುವು ಸಾಮಾನ್ಯ, ಇಂದು ಒಂದು ತಂಡ ಗೆದ್ದರೇ ನಾಳೆ ಮತ್ತೊಂದು ತಂಡ ಗೆಲುವು ಸಾಧಿಸುತ್ತೆ. ಗೆದ್ದ ತಂಡ ಸಂಭ್ರಮದಲ್ಲಿ ಮೈ ಮರೆಯದೇ ಮುಂದಿನ ಪಂದ್ಯಕ್ಕೆ ಅಭ್ಯಾಸ ನಡೆಸಬೇಕು. ಪಂದ್ಯ ಗೆದ್ದಾಗ ಗೆದ್ದೆತ್ತಿನ  ಬಾಲ ಹಿಡಿದವರು ಒಂದಲ್ಲ ಒಂದು ಸೋತು ಹ್ಯಾಪ್ ಮೊರೆ ಹಾಕಿಕೊಳ್ಳಬೇಕಾದ ಪರಿಸ್ಥಿತಿ ಬರುತ್ತೆ. ಹೀಗಾಗಿ ಇಲ್ಲಿ ಫಲಿತಾಂಶ ಒಂದೇ ಮುಖ್ಯವಲ್ಲ. ಆಟವನ್ನು ಆಟದ ರೀತಿಯಲ್ಲಿ ಮಾತ್ರ ನೋಡಬೇಕಿದೆ. ಅದನ್ನು ಬಿಟ್ಟು ಎದುರಾಳಿ ತಂಡದ ಆಟಗಾರರ ವೈಯಕ್ತಿಕ ವಿಷಯಗಳನ್ನು ಕೆದಕಿ, ಕಿಚಾಯಿಸಿ ಮೈದಾನದಲ್ಲಿ ದೊಂಬಿ ಮಾಡುವುದು ಎಷ್ಟು ಸರಿ.. ಇಂತಹವರ ವರ್ತನೆ ಮುಂದುವರೆದದ್ದೇ ಆದಲ್ಲಿ ಸಭ್ಯರ ಕ್ರೀಡೆ ಎಂದು ಕರೆಸಿಕೊಳ್ಳುತ್ತಿರುವ ಕ್ರಿಕೆಟ್ಗೆ ಕಳಂಕ ತಪ್ಪಿದ್ದಲ್ಲ.

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ವಿವಿಧ ದೇಶಗಳಲ್ಲಿರುವ ಬ್ಯಾಡ್ ಬಾಯ್ಸ್ಗಳ ಪಟ್ಟಿ ಹೀಗಿದೆ.

ಐಸಿಸಿ ಗುರುತಿಸಿರುವ 'ಬ್ಯಾಡ್ ಬಾಯ್ಸ್' ಪಟ್ಟಿಯಲ್ಲಿರುವ ಅಗ್ರಮಾನ್ಯರು ಭಾರತ ತಂಡದ ಭವಿಷ್ಯದ ನಾಯಕ ಎಂದೇ ಗುರುತಿಸಿಕೊಂಡಿರುವ ಆಟಗಾರ ವಿರಾಟ್ ಕೊಹ್ಲಿ.

ಭಾರತ ತಂಡದ ಭರವಸೆಯ ಆಟಗಾರ ವಿರಾಟ್ ಕೊಹ್ಲಿ ಅಗ್ರೇಸ್ಸಿವ್ ಪ್ಲೇಯರ್.. ಮೈದಾನದಲ್ಲಿ ಯಾವುದೇ ತಂಡ ಇದ್ದರೂ ಕೊಹ್ಲಿ ಲೆಕ್ಕದಲ್ಲಿ ಡೋಂಟ್ ಕೇರ್.. ಯಾವ ದೇಶದ ಆಟಗಾರನಾಗಿದ್ದರೂ ಲೆಕ್ಕಿಸದ ಜಾಯಮಾನ ಕೊಹ್ಲಿಯದ್ದು, ಅದರಲ್ಲೂ ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಂತೂ ಕೊಹ್ಲಿ ನಿಜಕ್ಕೂ ಉಗ್ರ ರೂಪ ತಾಳುತ್ತಾರೆ. ಎದುರಾಳಿ ಆಟಗಾರ ತಂಡದ ಯಾವೊಬ್ಬ ಆಟಗಾರನಿಗೂ ಕೆಣಕಿದರೂ ಕೊಹ್ಲಿ ತನ್ನದೇ ಸಮಸ್ಯೆ ಎಂದು ತಿಳಿದು ವಾಗ್ವಾದಕ್ಕೆ  ನಿಲ್ಲುತ್ತಾರೆ. ಅಲ್ಲಿ ತಪ್ಪು ಯಾರದ್ದೇ ಇರಲಿ, ಎದುರಾಳಿ ಆಟಗಾರರ ಮಾತಿಗೆ ಪ್ರತಿ ದಾಳಿ ನೀಡುವುದು ಕೊಹ್ಲಿ ಮಾತ್ರ. ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಪಂದ್ಯ ಒಂದರಲ್ಲಿ ಕೊಹ್ಲಿ ಕೈಯಲ್ಲಿನ  ಮಧ್ಯದ ಬೆರಳನ್ನು ತೋರಿ ಆಕ್ರೋಶ ವ್ಯಕ್ತಪಡಿಸಿದ್ದು ಟ್ವೀಟರ್ನಲ್ಲಿ ಹರಿದಾಡಿ ದೊಡ್ಡ ಸುದ್ದಿಯಾಗಿತ್ತು. ಅಲ್ಲದೇ ಒಮ್ಮೆ ಮಾತನಾಡುವಾಗ ಭಾರತ ತಂಡ ಸೋಲುವುದನ್ನು ನಾನು ದ್ವೇಷಿಸುತ್ತೆನೆ ಎಂದಿದ್ದರು.

ವಿಶ್ವದ ಸ್ಪೋಟಕ ಬ್ಯಾಟ್ಸ್ ಮನ್ ಎಂದೇ ಖ್ಯಾತಿ ಪಡೆದಿರುವ ವೆಸ್ಟ್ ಇಂಡೀಸ್ ತಂಡದ ದೈತ್ಯ ಪ್ರತಿಭೆ ಕ್ರಿಸ್ ಗೇಲ್ ಕೂಡ ಬ್ಯಾಡ್ ಬಾಯ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ವಿಶ್ವ ಕ್ರಿಕೆಟ್  ನಲ್ಲಿ ಗೇಲ್ ಸ್ವಭಾವ ವ್ಯತಿರಿಕ್ತವಾದದ್ದಾಗಿದೆ. ಏಕೆಂದರೆ ಗೇಲ್ ವೆಸ್ಟ್ ಇಂಡೀಸ್ ತಂಡದಲ್ಲಿಯೇ ನಿಷ್ಠುರ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಅಲ್ಲದೇ ಈ ಅಜಾನುಬಾಹು ಮೈದಾನದಲ್ಲಿ ಪಂದ್ಯ ನಡೆಯುವಾಗ ಎದುರಾಳಿ ತಂಡದ ಆಟಗಾರರ ಶೈಲಿಯನ್ನು ಅನುಕರಣೆ ಮಾಡಿ ಕಿಚಾಯಿಸುತ್ತಾರೆ. ಇದನ್ನು ಪ್ರಶ್ನಿಸಲು ಹೋಗುವ ಆಟಗಾರನಲ್ಲಿ ಗೇಲ್ ಮಾತಿನ ಚಕಮಕಿ ನಡೆಸುತ್ತಾರೆ. ಯಾವಾಗಲೂ ಮೌನಿಯಾಗಿರುವ ಗೇಲ್ ಒಮ್ಮೊಮ್ಮೆ ಮೈದಾನದಲ್ಲಿ ಹಾವಳಿ ಎ ಬ್ಬಿಸಿ ಸಾಕಪ್ಪ ಸಾಕು ಗೇಲ್ ಕಾಟ ಎನ್ನುವಷ್ಟರ ಮಟ್ಟಿಗೆ ಕಾಟ ನೀಡಿದ್ದಾರೆ.  

ಇಂಗ್ಲೆಂಡ್ ತಂಡದ ಸ್ಟಾರ್ ವೇಗಿ ಸ್ಟುವಟರ್್ ಬ್ರಾಡ್ ಕೂಡ ಈ ಪಟ್ಟಿಯಲ್ಲಿದ್ದಾರೆ. ಬ್ರಾಡ್ ತನ್ನ ಸೌಂದರ್ಯದಿಂದಲೇ ಅಪಾರ ಅಭಿಮಾನಿಗಳನ್ನು ಸಂಗ್ರಹಿಸಿದ್ದಾರೆ. ಬ್ರಾಡ್ ಅವರನ್ನು ಆಸ್ಟ್ರೇಲಿಯಾದ ಕೋಚ್ ಡರೇನ್ ಲೆಹಮನ್ 'ಚೀಟ್' ಎಂದೇ ಕರೆಯುವುದು. ಬ್ರಾಡ್ ಕೂಡ ಮೈದಾನದಲ್ಲಿ ಗಲಾಟೆ ಮಾಡುವುದರಲ್ಲಿ ಎತ್ತಿದ ಕೈ, ಎದುರಾಳಿ ಆಟಗಾರರ ವಿರುದ್ಧ ದಂಡೆತ್ತಿ ಹೋಗಿಯೇ ಎಷ್ಟು ಬಾರಿ ಆಡಳಿತ ಮಂಡಳಿಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಪಾಕಿಸ್ತಾನ ತಂಡದ ಅನುಭವಿ ಆಟಗಾರ ಶಾಹಿದ್ ಆಫ್ರಿದಿ ಬ್ಯಾಡ್  ಬಾಯ್ಸ್ ಲಿಸ್ಟ್ನಲ್ಲಿದ್ದಾರೆ. ಬ್ಯಾಟಿಂಗ್ನಲ್ಲಿ ಬೂಮ್ ಬೂಮ್ ಎಂದೇ ನಾಮಾಂಕಿತರಾಗಿರುವ ಆಫ್ರಿದಿ, ಅಂಗಣದಲ್ಲಿ ಕಿರಿಕ್ ವಿಷಯದಲ್ಲೂ ಅಷ್ಟೇ ಫೇಮಸ್ ಆಗಿದ್ದಾರೆ. ವಯಸ್ಸಿನ ಅಂತರದಲ್ಲಿ ಆಫ್ರಿದಿಗೆ ಇದು ಕೊನೆಯ ವಿಶ್ವಕಪ್ ಆಗಿದೆ. ಪಂದ್ಯಗಳು ನಡೆಯುವಾಗ ಎದುರಾಳಿ ತಂಡದ ಮೇಲೆ ಮಾಡುವ ವಾಗ್ವಾದದಿಂದಾಗಿ ಆಫ್ರಿದಿಗೆ ಕ್ರಿಕೆಟ್ ಜಗತ್ತಿನಲ್ಲಿ ಬ್ಯಾಡ್ ನೇಮ್ ಬಂದಿದೆ.

ಆಸ್ಟ್ರೇಲಿಯಾ ತಂಡ ಎಂದರೇ ಉತ್ತಮ ಕ್ರಿಕೆಟ್ ಆಟಗಾರರು ಕಣ್ಣು ಮುಂದೆ  ಹಾದು ಹೋಗ್ತಾರೆ. ಹಾಗೆ ಬ್ಯಾಡ್ ಕ್ರಿಕೆಟಸರ್್ ಆಸಿಸ್ ತಂಡದಲ್ಲಿಯೇ ಹೆಚ್ಚಿದ್ದಾರೆ ಎನ್ನುವುದಕ್ಕೆ ಪ್ರಸ್ತುತ ಡೇವಿಡ್ ವಾರ್ನರ್ ಸಾಕ್ಷಿಯಾಗಿದ್ದಾರೆ. ಈ ಹಿಂದೆ ಆಸಿಸ್ ತಂಡದಲ್ಲಿ  ಶೇನ್ ವಾನರ್್, ಸೈಮಂಡ್ಸ್ ಅವರಂತಹ ಆಟಗಾರರು ಬ್ಯಾಡ್ ಬಾಯ್ಸ್ ಸ್ಥಾನವನ್ನು ಫುಲ್ ಫಿಲ್ ಮಾಡುತ್ತಿದ್ದರು. ಆದರೆ ಈಗ ವಾರ್ನರ್ ಅವರಿಬ್ಬರ ಜಾಗವನ್ನು ಭತರ್ಿ ಮಾಡುತ್ತಿದ್ದಾರೆ.

ವಿಶ್ವ ಕ್ರಿಕೆಟ್ನಲ್ಲಿ ವೇಗದೂತ ಎಂದೆ ಹೆಸರು ಪಡೆದಿರುವ ದಕ್ಷಿಣ ಆಫ್ರಿಕಾ ತಂಡದ ಸ್ಟಾರ್ ಬೌಲರ್ ಡೇಲ್ ಸ್ಟೇನ್ ಕೂಡ ಬ್ಯಾಡ್ ಬಾಯ್ಸ್ ಲಿಸ್ಟ್ನಲ್ಲಿದ್ದಾರೆ. ಅಂಗಣದಲ್ಲಿ ಅಗ್ರೇಸ್ಸಿವ್ ಆಗಿರುವ ಸ್ಟೇನ್ ಎದುರಾಳಿ ಆಟಗಾರರನ್ನು ಕಿಚಾಯಿಸುವ ಶೈಲಿ ಹೊಂದಿದ್ದಾರೆ.

ಆಸ್ಟ್ರೇಲಿಯಾ ತಂಡದ ಸ್ಪೀಡ್ ಸ್ಟಾರ್ ಮಿಚೆಲ್ ಜಾನ್ಸನ್ ವೇಗ ಹಾಗೂ ಕರಾರುವಕ್ ದಾಳಿ ನಡೆಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಅದರಂತೆ ಎದುರಾಳಿ ಆಟಗಾರರ ವಿರುದ್ಧ ಗೊಣಗುವುದನ್ನು ರೂಢಿಸಿಕೊಂಡಿದ್ದಾರೆ. ಹೀಗಾಗಿಯೇ ಬ್ಯಾಡ್ ಬಾಯ್ಸ್ ಲಿಸ್ಟ್ನಲ್ಲಿ ಸ್ಥಾನ ಪಡೆದಿದ್ದಾರೆ.

ಭಾರತ ತಂಡದ ಆಲ್ರೌಂಡರ್ ರವೀಂದ್ರ ಜಡೇಜಾ ಕೂಡ ಈ ಲಿಸ್ಟ್ನಲ್ಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ಒಂದರಲ್ಲಿ ಜಡ್ಡು ಆಟಗಾರರ  ವೈಯಕ್ತಿಕ ವಿಷಯವನ್ನು ಪ್ರಸ್ತಾಪಿಸಿ ಆಡಳಿತ ಮಂಡಳಿಯಿಂದ ಶಿಕ್ಷೆಗೆ ಒಳಗಾಗಿದ್ದರು.

ಒಟ್ಟಿನಲ್ಲಿ ಕ್ರಿಕೆಟಿಗರು ಒಂದಲ್ಲ ಒಂದು ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಂದು ವಿವಾದ  ಸೃಷ್ಟಿಸಿಕೊಳ್ಳುತ್ತಿರೋವುದಂತು ಸತ್ಯ. ಮುಂದಿನ ದಿನಗಳಲ್ಲಾದರೂ ಆಟಗಾರರ ಉಪಟಳವನ್ನು ನಿಯಂತ್ರಿಸಲು ಐಸಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವುದು ಅಸಂಖ್ಯಾತ ಕ್ರೀಡಾಭಿಮಾನಿಗಳ ಆಶಯ..